ಮರಗಳ ಬಗ್ಗೆ ಪ್ರಾಚೀನ ಗ್ರಂಥಗಳು ಏನು ಹೇಳುತ್ತವೆ
ಪ್ರಕೃತಿಯ ಆರಾಧನೆ ವಿಶ್ವದ ಎಲ್ಲಾ ನಾಗರಿಕತೆಗಳ ಅವಿಭಾಜ್ಯ ಅಂಗವಾಗಿತ್ತು. ಈಗ ಅದು ಭಾರತೀಯ ಸಂಸ್ಕೃತಿಯಲ್ಲಿ ಉಳಿದುಕೊಂಡು ಬಂದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಸದ್ಯ ಈ ಲೇಖನ ನಮ್ಮ ವೇದ ಉಪನಿಷತ್ತಿನಲ್ಲಿ ಬರುವ ವೃಕ್ಷಗಳ ಬಗ್ಗೆ ಮಾಹಿತಿ ನೀಡಲಿದೆ. ವಿಶ್ವದ ಅತ್ಯಂತ ಪ್ರಾಚೀನ ಗ್ರಂಥವಾದ ವೇದ ಇಂದು ಉಳಿದಿರುವ ಬೇರೆ ಎಲ್ಲಾ ಗ್ರಂಥಗಳ ರಚನೆಯ ಆಧಾರ. ವೇದವೆಂದರೆ ಜ್ಞಾನ. ಈ ಅತ್ಯಂತ ಪುರಾತನ ಜ್ಞಾನ ಭಂಡಾರ ನೀಡಿರುವ ವೇದ ಋಷಿಗಳಿಗೆ…